ನವದೆಹಲಿ: ಪಾಕಿಸ್ತಾನದಲ್ಲಿ ಬೇಹುಗಾರಿಕೆ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಭಾರತದ ನೌಕಾ ಪಡೆ ಮಾಜಿ ಅಧಿಕಾರಿ ಕುಲಭೂಷಣ್ ಜಾದವ್ ಕುಟುಂಬದವರನ್ನು ನಡೆಸಿಕೊಂಡ ಪಾಕ್ ಕ್ರಮಕ್ಕೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಜಾದವ್ ಪತ್ನಿ ಮತ್ತು ತಾಯಿಗೆ ಭೇಟಿಗೆ ಅವಕಾಶ ಕೊಟ್ಟಿದ್ದ ಪಾಕಿಸ್ತಾನ ವಿದೇಶಾಂಗ ಇಲಾಖೆ, ಇಬ್ಬರನ್ನೂ ಕರಿಮಣಿ ಸರ ತೆಗೆದು, ಕುಂಕುಮ, ಕಿವಿಯೋಲೆ ತೆಗೆಸಿ ಭೇಟಿ ಮಾಡಿಸಿತ್ತು. ಇದಕ್ಕೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು.ಜಾದವ್ ರೀತಿಯಲ್ಲೇ 2008 ರಲ್ಲಿ ಪಾಕಿಸ್ತಾನದಲ್ಲಿ ಖೈದಿಯಾಗಿದ್ದ