ಸೊಸೆಯ ಮೇಲೆ ಮಾನಭಂಗ ಎಸಗಿದ ಮಾವ; ವಿರೋಧಿಸಿದ ಮಗನಿಗೆ ಆಗಿದ್ದೇನು?

ಬರೇಲಿ| pavithra| Last Updated: ಸೋಮವಾರ, 30 ನವೆಂಬರ್ 2020 (15:52 IST)
ಬರೇಲಿ : ತನ್ನ ಸೊಸೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ವೈದ್ಯನೊಬ್ಬ ವಿರೋಧಿಸಿದ ಮಗನನ್ನು ಗುಂಡಿಕ್ಕಿ ಕೊಂದ ಘಟನೆ ಉತ್ತರ ಪ್ರದೇಶದ ಮೊರಾದಾ ಬಾದ್ ಜಿಲ್ಲೆಯಲ್ಲಿ ನಡೆದಿದೆ.

ಮಹಿಳೆಯ ಪತಿ ಮತ್ತು ಮನೆಯವರು ಸಂಬಂಧಿಕರ ಮದುವೆಗೆ ತೆರಳಿದಾಗ ಮನೆಯಲ್ಲಿ ಒಬ್ಬಂಟಿಯಾಗಿದ್ದ ಸೊಸೆಯ ಮೇಲೆ ಮಾನಭಂಗ ಎಸಗಿದ್ದಾನೆ. ಈ ವಿಚಾರ ಆಕೆ ತನ್ನ ಪತಿಗೆ ತಿಳಿಸಿದಾಗ ಆತ ತನ್ನ ತಂದೆಯ ವಿರುದ್ಧ ವಾದಕ್ಕಿಳಿದಿದ್ದಾನೆ. ಆ ವೇಳೆ ಆರೋಪಿಯ ಕಿರಿಯ ಮಗ ತನ್ನ ತಂದೆಗೆ ಬೆಂಬಲ ನೀಡಿದ್ದಾನೆ. ಮೂವರ ನಡುವೆ ಮಾತಿನ ಚಕಮಕಿ ನಡೆದು ತಂದೆ ತನ್ನ ಬಳಿ ಇದ್ದ ಪಿಸ್ತೂಲಿನಿಂದ ಮಗನಿಗೆ ಶೂಟ್ ಮಾಡಿದ್ದಾನೆ.

ಈ ಘಟನೆಯಲ್ಲಿ ಮಗ ಸಾವನಪ್ಪಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ವೈದ್ಯ ಮತ್ತು ಆತನ ಕಿರಿಯ ಮಗನನ್ನು ಬಂಧಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :