ಬ್ರಿಟನ್ : ಬ್ರಿಟಿಷ್ ಚಾನೆಲ್ನಲ್ಲಿ ದೋಣಿಯೊಂದು ಮುಳುಗಿ ಕನಿಷ್ಠ 31 ಮಂದಿ ವಲಸಿಗರು ಜಲಸಮಾಧಿಯಾದ ಭೀಕರ ಘಟನೆ ಬುಧವಾರ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಇದು ಅತ್ಯಂತ ದೊಡ್ಡ ವಲಸೆ ದುರಂತವಾಗಿದೆ ಎಂದು ಫ್ರಾನ್ಸ್ನ ಆಂತರಿಕ ಸಚಿವರು ತಿಳಿಸಿದ್ದಾರೆ. ದೋಣಿಯಲ್ಲಿ ಒಟ್ಟು 34 ಮಂದಿ ವಲಸಿಗರು ಇದ್ದರು ಎನ್ನಲಾಗಿದೆ. ಅವರ ಪೈಕಿ 31 ಮೃತದೇಹಗಳನ್ನು ಅಧಿಕಾರಿಗಳು ಹೊರ ತೆಗೆದಿದ್ದಾರೆ. ಇದರಲ್ಲಿ ಐವರು ಮಹಿಳೆಯರು ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇಬ್ಬರು ಬದುಕುಳಿದಿದ್ದಾರೆ. ಇನ್ನೊಬ್ಬ