ವಾಷಿಂಗ್ಟನ್ : 20ನೇ ದಿನಕ್ಕೆ ಕಾಲಿಟ್ಟಿರುವ ರಷ್ಯಾ ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಉಕ್ರೇನ್ಗೆ ಆಯುಧಗಳು, ಆಹಾರ ಮತ್ತು ಹಣದ ರೂಪದಲ್ಲಿ ಬೆಂಬಲ ನೀಡುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.ಉಕ್ರೇನ್ನ ಮೇಲೆ ರಷ್ಯಾ ದಾಳಿ ತಾರಕಕ್ಕೆ ಏರುತ್ತಿದ್ದು, ಈ ಬಗ್ಗೆ ಅನೇಕ ರಾಷ್ಟ್ರಗಳು ವಿರೋಧವನ್ನು ವ್ಯಕ್ತಪಡಿಸಿದೆ. ಅದರಲ್ಲೂ ಪ್ರಮುಖವಾಗಿ ಅಮೆರಿಕ ಮೊದಲನಿಂದಲೂ ವಿರೋಧವನ್ನು ವ್ಯಕ್ತಪಡಿಸುತ್ತಿದೆ.ಈ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಂದು ಟ್ವೀಟ್ ಮಾಡಿ, ಉಕ್ರೇನಿನ ಜನರು ಯುದ್ಧದಿಂದ