ಅಮೇರಿಕ ಕ್ಯಾಪಿಟಲ್ ಬಿಲ್ಡಿಂಗ್ ನಲ್ಲಿ ಘರ್ಷಣೆ ಹಿನ್ನಲೆ; ಡೊನಾಲ್ಡ್ ಟ್ರಂಪ್ ಟ್ವೀಟರ್, ಫೇಸ್ ಬುಕ್ ಖಾತೆ ಲಾಕ್

ಅಮೇರಿಕ| pavithra| Last Modified ಗುರುವಾರ, 7 ಜನವರಿ 2021 (11:08 IST)
: ಅಮೇರಿಕ ಕ್ಯಾಪಿಟಲ್ ಬಿಲ್ಡಿಂಗ್ ನಲ್ಲಿ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಪುಟಲ್ ಕಟ್ಟಡದೊಳಗೆ ನುಗ್ಗಿದ ಟ್ರಂಪ್ ಬೆಂಬಲಿಗರು ಎಲೆಕ್ಟೋರಲ್ ಕಾಲೇಜು ಮತ ಎಣಿಕೆಗೆ ಅಡ್ಡಿಪಡಿಸಿದ್ದರು ಎನ್ನಲಾಗಿದೆ.

ಅಲ್ಲದೇ ಅಮೇರಿಕ ಕ್ಯಾಪಿಟಲ್ ಬಿಲ್ಡಿಂಗ್ ನಲ್ಲಿ ಘರ್ಷಣೆ ಹಿನ್ನಲೆಯಲ್ಲಿ  ಟ್ರಂಪ್ ಟ್ವೀಟರ್ ಖಾತೆಯಲ್ಲಿದ್ದ ಟ್ವೀಟ್ ಗಳು ಡಿಲೀಟ್ ಮಾಡಲಾಗಿದೆ. ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾಡಿದ್ದ  2 ಟ್ವೀಟ್, ವಿಡಿಯೋ ಟ್ವೀಟರ್ ಸಂಸ್ಥೆ ಡಿಲೀಟ್ ಮಾಡಿದೆ.

ಹಾಗೇ ಡೊನಾಲ್ಡ್ ಟ್ರಂಪ್ ಟ್ವೀಟರ್, ಫೇಸ್ ಬುಕ್ ಖಾತೆ ಲಾಕ್ ಮಾಡಲಾಗಿದೆ. 12 ಗಂಟೆಗಳ ಕಾಲ ಟ್ರಂಪ್ ಟ್ವೀಟರ್ ಖಾತೆ ಬಂದ್, ಹಾಗೂ 24 ಗಂಟೆಗಳ ಕಾಲ ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂ  ಖಾತೆ ಬಂದ್ ಮಾಡಲಾಗಿದೆ.  ಆಕ್ಷೇಪಾರ್ಹ ಸಂದೇಶ ಪೋಸ್ಟ್ ಮಾಡಿದ್ದ ಹಿನ್ನಲೆ ಬಂದ್ ಮಾಡಲಾಗಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :