ವಾಷಿಂಗ್ಟನ್ : ನಿಮ್ಮಲ್ಲಿ ಜಿಮೇಲ್ ಖಾತೆ ಇದ್ದರೂ ಕೂಡಾ ಅದನ್ನು 2 ವರ್ಷಗಳಿಂದ ಬಳಸಿಯೇ ಇಲ್ಲ ಎಂದಾದರೆ ನಿಮ್ಮ ಖಾತೆಗೆ ಇದೀಗ ಕುತ್ತು ಬರುವ ಸಾಧ್ಯತೆಯಿದೆ. ಗೂಗಲ್ ತನ್ನ ಬಳಕೆದಾರರ ನಿಷ್ಕ್ರಿಯ ಖಾತೆಗಳ ನೀತಿಯಲ್ಲಿ ಹೊಸ ಬದಲಾವಣೆ ತಂದಿದೆ. ಬಳಕೆದಾರರು ತನ್ನ ಹಳೆಯ ಗೂಗಲ್ ಖಾತೆಗಳನ್ನು ಲಾಗ್ಇನ್ ಮಾಡಲು ಹಾಗೂ ಪರಿಶೀಲಿಸಲು ಹೇಳಿದೆ. ಈ ಹಿಂದೆ 2 ವರ್ಷಗಳಿಂದ ಕಾರ್ಯನಿರ್ವಹಿಸದ ಖಾತೆಗಳಲ್ಲಿ ಸಂಗ್ರಹವಾಗಿರುವ ಡೇಟಾಗಳನ್ನು ಅಳಿಸಿ ಹಾಕುವುದಾಗಿ ಗೂಗಲ್