ಕೊಲಂಬೋ : ತೀವ್ರ ಸಂಕಷ್ಟದಲ್ಲಿರುವ ಶ್ರೀಲಂಕಾದ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ.ಮುಖ್ಯವಾಗಿ ಇಂಧನ ಕೊರತೆ ಆ ದೇಶವನ್ನು ಇನ್ನಿಲ್ಲದಂತೆ ಬಾಧಿಸುತ್ತಿದೆ. ಪೆಟ್ರೋಲ್ ಖಾಲಿಯಾದ ಪರಿಣಾಮ ದ್ವೀಪ ರಾಷ್ಟ್ರದಲ್ಲಿ ಇದೀಗ ಶಾಲೆ ಕಾಲೇಜು ಬಂದ್ ಆಗಿದೆ.ತುರ್ತು ಸೇವೆಗಳ ಕಚೇರಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸರ್ಕಾರಿ ಕಚೇರಿಗೆ ರಜೆ ನೀಡಲಾಗಿದೆ. ಈ ಪರಿಸ್ಥಿತಿ ಎಷ್ಟು ದಿನ ಮುಂದುವರೆಯಲಿದೆ ಎಂಬುದು ಗೊತ್ತಿಲ್ಲ.ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾ ತನ್ನ 70 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಸಾಲಕಟ್ಟಲು