ಬೀಜಿಂಗ್(ಆ.03): ಪದೇ ಪದೇ ಕಾಡುತ್ತಿರುವ ಸಾಂಕ್ರಾಮಿಕ ರೋಗಗಳಿಂದ, ದೇಶದ ಪ್ರಮುಖ ಮಾಂಸದ ಮೂಲವಾದ ಹಂದಿಗಳನ್ನು ಕಾಪಾಡಲು ಚೀನಾ ಸರ್ಕಾರ ಹೊಸದೊಂದು ಯೋಜನೆ ರೂಪಿಸಿದೆ. ಹಂದಿಗಳನ್ನು ಅತ್ಯಂತ ಸುರಕ್ಷತೆ ಮತ್ತು ಭದ್ರತೆ ಇರುವ, ಯಾವುದೆ ಹೊರಗಿನ ವ್ಯಕ್ತಿಗಳ ಸಂಪರ್ಕಕ್ಕೆ ಬರದ ರೀತಿಯ ಕಟ್ಟಡದಲ್ಲಿ ಇಡುವುದು! ಹೌದು. ದಕ್ಷಿಣ ಚೀನಾದ ಹಲವು ನಗರಗಳಲ್ಲಿ ಹಂದಿಗಳನ್ನು ಸೋಂಕು ಮುಕ್ತವಾಗಿರಿಸಲು ಹಾಗ್ ಹೋಟೆಲ್ (ಹಂದಿಗಳ ಅತಿಥಿ ಗೃಹ) ನಿರ್ಮಿಸಲಾಗುತ್ತಿದೆ. ಇಂಥ ಒಂದು ಕಟ್ಟಡವಂತೂ 13 ಮಹಡಿ