ಯುಟ್ಯೂಬ್ ಲೈವ್ ಗೋಸ್ಕರ ಗರ್ಭಿಣಿ ಪತ್ನಿಯನ್ನು ಬಿಕಿನಿಯಲ್ಲಿ ಚಳಿಯಲ್ಲಿ ನಿಲ್ಲಿಸಿದ ಪತಿ!

ಮಾಸ್ಕೋ| pavithra| Last Modified ಮಂಗಳವಾರ, 8 ಡಿಸೆಂಬರ್ 2020 (07:26 IST)
ಮಾಸ್ಕೋ : ಯುಟ್ಯೂಬ್ ಲೈವ್ ಗೋಸ್ಕರ್ ವ್ಯಕ್ತಿಯೊಬ್ಬ ಗರ್ಭಿಣಿ ಪತ್ನಿಯನ್ನು ಬಿಕಿನಿಯಲ್ಲಿ ಚಳಿಯಲ್ಲಿ ನಿಲ್ಲಿಸಿ ಕೊಲೆ ಮಾಡಿದ ಘಟನೆ ರಷ್ಯಾದಲ್ಲಿ ನಡೆದಿದೆ.

ಆರೋಪಿ ಪತಿ ಲೈವ್ ಸ್ಟ್ರೀಮ್ ಗಾಗಿ ಮೈನಸ್ ಡಿಗ್ರಿ ಚಳಿಯಲ್ಲಿ ಗರ್ಭಿಣಿ ಪತ್ನಿಗೆ ಬಿಕಿನಿ ತೊಡಿಸಿ ಮನೆಯಿಂದ ಹೊರಗೆ ಚಳಿಯಲ್ಲಿ ನಿಲ್ಲಿಸಿದ್ದಾನೆ. ತೀವ್ರ ಚಳಿಯಿಂದಾಗಿ ಪತ್ನಿ ಪ್ರಾಣ ಬಿಟ್ಟಿದ್ದಾಳೆ. ತಕ್ಷಣ ಆತ ಆಕೆಯನ್ನು ಮನೆಯೊಳಗೆ ಕರೆತಂದು ವೈದ್ಯರನ್ನು ಕರೆಸಿದಾಗ ಅವಳು ಚಳಿಯಿಂದ ಮೃತಪಟ್ಟಿರುವುದು ತಿಳಿದುಬಂದಿದೆ.

ಈ ಘಟನೆಗೆ ಸಂಬಂಧಿಸಿದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾಗಾಗಿ ಈ ಬಗ್ಗೆ ಪತಿಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಕೃತ್ಯಕ್ಕೆ ಆತನಿಗೆ 2 ವರ್ಷಗಳಿಗಿಂತ ಹೆಚ್ಚು ವರ್ಷ ಜೈಲು ಶಿಕ್ಷೆಯಾಗಲಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :