ಚೀನಾ ವ್ಯಾಕ್ಸಿನ್ ಪಡೆದ ಪಾಕ್ ಪ್ರಧಾನಿಗೆ ಕೊರೋನಾ

ಇಸ್ಲಾಮಾಬಾದ್| Krishnaveni K| Last Modified ಭಾನುವಾರ, 21 ಮಾರ್ಚ್ 2021 (09:18 IST)
ಇಸ್ಲಾಮಾಬಾದ್: ಕೊರೋನಾಗೆ ಚೀನಾ ನಿರ್ಮಿತ ವ್ಯಾಕ್ಸಿನ್ ಪಡೆದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗೆ ಈ ಸೋಂಕು ತಗುಲಿದೆ.

 
ಇಮ್ರಾನ್ ಖಾನ್ ಗೆ ಸೋಂಕು ತಗುಲಿರುವುದನ್ನು ಅವರ ಆಪ್ತರೇ ಸಾಮಾಜಿಕ ಜಾಲತಾಣದ ಮೂಲಕ ಖಚಿತಪಡಿಸಿದ್ದು, ಪ್ರಸ್ತುತ ಇಮ್ರಾನ್ ಖಾನ್ ತಮ್ಮ ಮನೆಯಲ್ಲಿ ಸ್ವಯಂ ಪ್ರತ್ಯೇಕತೆಗೊಳಗಾಗಿದ್ದಾರಂತೆ.
 
ಮೊನ್ನೆಯಷ್ಟೇ ಇಮ್ರಾನ್ ಚೀನಾ ನಿರ್ಮಿತ ಸಿನೋಫಾರ್ಮ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದರು. ಸದ್ಯಕ್ಕೆ ಪಾಕಿಸ್ತಾನದಲ್ಲಿ ಇದೊಂದೇ ಕೊರೋನಾ ಲಸಿಕೆ ಲಭ್ಯವಿದೆ. ಆದರೆ ಲಸಿಕೆ ಪಡೆದುಕೊಂಡ ಮಾರನೇ ದಿನವೇ ಅವರು ಕೊರೋನಾ ಸೋಂಕಿಗೊಳಗಾಗಿರುವುದು ದುರಾದೃಷ್ಟವೆಂದೇ ಹೇಳಬಹುದು. ಇದರಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಅವರು ಸಾಕಷ್ಟು ಟ್ರೋಲ್ ಗೊಳಗಾಗಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :