ನವದೆಹಲಿ: ಲಡಾಖ್ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಸರಿಪಡಿಸಲು ಭಾರತ ಮತ್ತು ಚೀನಾ ಪರಸ್ಪರ ಸೇನಾಧಿಕಾರಿಗಳ ಮಟ್ಟದಲ್ಲಿ ನಿನ್ನೆ ಸಭೆ ನಡೆಸಿದೆ. ಈ ಸಭೆಯಲ್ಲಿ ಭಾರತಕ್ಕೆ ಗಡಿಯಲ್ಲಿ ರಸ್ತೆ ನಿರ್ಮಿಸದಂತೆ ಚೀನಾ ಆಗ್ರಹಿಸಿದರೆ ಭಾರತ ಸೇನೆ ಹಿಂದಕ್ಕೆ ಕರೆಸಿಕೊಳ್ಳಲು ಬೇಡಿಕೆಯಿಟ್ಟಿದೆ. ಲೆಫ್ಟಿನೆಂಟ್ ಜನರಲ್ ಶ್ರೇಯಾಂಕದ ಅಧಿಕಾರಿಗಳ ನಡುವೆ ನಿನ್ನೆ ವಿವಾದಿತ ಪ್ರದೇಶದಲ್ಲಿ ಮಹತ್ವದ ಮಾತುಕತೆ ನಡೆದಿದೆ. ಈ ವೇಳೆ ಗಡಿಯಲ್ಲಿ ಉಂಟಾಗಿರುವ ಪರಿಸ್ಥಿತಿ ತಿಳಿಗೊಳಿಸಲು ಎರಡೂ ರಾಷ್ಟ್ರಗಳು ತಮ್ಮ ತಮ್ಮ