ನವದೆಹಲಿ(ಜು.30): ಚೀನಾದ ಗಡಿ ಹಂಚಿಕೊಳ್ಳುವ ಸಿಕ್ಕಿಂ-ಭೂತಾನ್ ಮತ್ತು ಟಿಬೆಟ್ನ ತೀರಾ ಹತ್ತಿರಕ್ಕೆ ಹೊಚ್ಚ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ರಫೇಲ್ ಯುದ್ಧ ವಿಮಾನಗಳನ್ನು ಭಾರತ ಸರ್ಕಾರ ನಿಯೋಜನೆ ಮಾಡಿದೆ. ಪೂರ್ವ ಲಡಾಖ್ ಗಡಿ ಬಿಕ್ಕಟ್ಟು ಶಮನಕ್ಕಾಗಿ ಶನಿವಾರ ಉಭಯ ದೇಶಗಳ ಮಧ್ಯೆ ಸೇನಾ ಹಂತದ ಶಾಂತಿ ಮಾತುಕತೆ ನಡೆಯುವ ಸಾಧ್ಯತೆಯಿದೆ. ಇದಕ್ಕೂ ಮುನ್ನವೇ ಚೀನಾದ ಗಡಿಯ ಹತ್ತಿರಕ್ಕೆ ರಫೇಲ್ ಯುದ್ಧ ವಿಮಾನಗಳನ್ನು ನಿಯೋಜಿಸುವ ಮುಖಾಂತರ ಚೀನಾಕ್ಕೆ ಭಾರತ ಕಠಿಣ ಸಂದೇಶ ರವಾನಿಸಿದೆ.