ಭಾರತದ ವಿರುದ್ಧ ಕಿರು ಅಣ್ವಸ್ತ್ರ ಪ್ರಯೋಗದ ಬೆದರಿಕೆ ಹಾಕಿದ್ದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಭಾರತ ತಕ್ಕ ಉತ್ತರ ಕೊಟ್ಟಿದೆ. ಪಾಕಿಸ್ತಾನ ಭೌಗೋಳಿಕವಾಗಿ ಭಯೋತ್ಪಾದನೆಯ ಸಮಾನಾರ್ಥವಾಗಿ ಗುರುತಿಸಿಕೊಂಡಿದೆ. ಅದು ಪಾಕಿಸ್ತಾನವಲ್ಲ, ಟರರಿಸ್ಥಾನ ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾರತದ ವಿಶ್ವಸಂಸ್ಥೆಯ ಮೊದಲ ಕಾರ್ಯದರ್ಶಿ ಈನಮ್ ಗಂಭೀರ್ ವಾಗ್ದಳಿ ನಡೆಸಿದ್ಧಾರೆ.