Widgets Magazine

73 ದಿನಗಳ ನಂತರ ಲಾಕ್ ಡೌನ್ ನಿಂದ ಹೊರಬಂದ ಈ ಭಾರತೀಯನ ಕತೆ ಏನಾಗಿತ್ತು ಗೊತ್ತಾ?!

ಬೀಜಿಂಗ್| Krishnaveni K| Last Modified ಶುಕ್ರವಾರ, 10 ಏಪ್ರಿಲ್ 2020 (09:27 IST)
ಬೀಜಿಂಗ್: ಕೊರೋನಾ ತವರು ಚೀನಾದ ವುಹಾನ್ ನಲ್ಲಿ ಸಿಲುಕಿಕೊಂಡಿದ್ದ ಭಾರತೀಯ ಅರುಣ್ ಜಿತ್ ಎಂಬವರು ಲಾಕ್ ಡೌನ್ ದಿನಗಳ ನೆನಪನ್ನು ಹಂಚಿಕೊಂಡಿದ್ದಾರೆ.

 
ಬರೋಬ್ಬರಿ 73 ದಿನಗಳವರೆಗೆ ಮನೆಯೊಳಗೇ ಬಂಧಿಯಾಗಿದ್ದ ತನಗೆ ಲಾಕ್ ಡೌನ್ ಮುಕ್ತಾಯವಾದ ಮೇಲೆ ಹೊರಗೆ ಬಂದಾಗ ಮಾತನಾಡಲೂ ಪದಗಳು ಸಿಗುತ್ತಿರಲಿಲ್ಲ. ಭಾಷೆಯೇ ಮರೆತು ಹೋದಂತಾಗಿತ್ತು ಎಂದಿದ್ದಾರೆ.
 
ಆದರೆ ಹೀಗೆ ಮಾಡುವುದೇ ಕೊರೋನಾ ನಿಯಂತ್ರಿಸಲು ತಕ್ಕ ಉಪಾಯ. ತೀರಾ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬರಬೇಕು. ಇಲ್ಲವೇ ನಾಲ್ಕು ಗೋಡೆಯೊಳಗೇ ಕಾಲ ಕಳೆಯಿರಿ. ಇದನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ಕೊರೋನಾದಿಂದ ರಕ್ಷಿಸಿಕೊಳ್ಳಬಹುದು ಎಂದು ಅರುಣ್ ಜಿತ್ ಹೇಳಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :