ಪತ್ನಿ ಪಕ್ಕದಲ್ಲಿದ್ರೂ ಮತ್ತೊಬ್ಬ ಮಹಿಳೆಯ ಗುಪ್ತಾಂಗಕ್ಕೆ ಬೆರಳು ತೂರಿಸಿದ ಭೂಪ

ಡೆಟ್ರಾಯಿಟ್| Rajesh patil| Last Modified ಶನಿವಾರ, 6 ಜನವರಿ 2018 (17:18 IST)
 ಪತ್ನಿ ಪಕ್ಕದಲ್ಲಿದ್ರೂ ಮತ್ತೊಬ್ಬ ಮಹಿಳೆಯ ಪ್ಯಾಂಟ್‌ನೊಳಗೆ ಕೈ ತೂರಿಸಿದ ಭೂಪ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಸ್ಪ್ರಿಂಟ್‌ ಏರ್‌ಲೈನ್ಸ್‌ನಲ್ಲಿ ಲಾಸ್ ವೆಗಾಸ್‌ನಿಂದ ಡೆಟ್ರಾಯಿಟ್‌ಗೆ ತಿರಳುತ್ತಿರುವ ವಿಮಾನದಲ್ಲಿ ಆರೋಪಿ ಅನಿವಾಸಿ ಭಾರತೀಯ ಪ್ರಭು ರಾಮಮೂರ್ತಿ, 22 ವರ್ಷದ ಮಹಿಳೆಗೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
 
 ತಾತ್ಕಾಲಿಕ ವೀಸಾ ಪಡೆದು ಅಮೆರಿಕದಲ್ಲಿ ನೆಲೆಸಿರುವ 34 ವರ್ಷ ವಯಸ್ಸಿನ ಪ್ರಭು ರಾಮಮೂರ್ತಿ, ಪಕ್ಕದಲ್ಲಿ ಕುಳಿತಿದ್ದ ಅಮೆರಿಕ ಮಹಿಳೆ ನಿದ್ರೆಯಲ್ಲಿದ್ದಾಗ ಆಕೆಯ ಪ್ಯಾಂಟಿನೊಳಗೆ ಕೈ ಹಾಕಿ ಗುಪ್ತಾಂಗದಲ್ಲಿ ಬೆರಳು ತೂರಿಸಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.
 
ಮಹಿಳೆ ದೂರಿನ ಪ್ರಕಾರ, ತಾನು ಎಚ್ಚರವಾದಾಗ ತನ್ನ ಶರ್ಟ್ ಮತ್ತು ಪ್ಯಾಂಟ್‌‌ಗಳ ಬಟನ್ ಬಿಚ್ಚಲಾಗಿದ್ದು ಆರೋಪಿ ಪ್ರಭು ತನ್ನ ಗುಪ್ತಾಂಗದ ಮೇಲೆ ಕೈಯಾಡಿಸುತ್ತಿದ್ದ. ಅಚ್ಚರಿಯ ವಿಷಯವೆಂದರೆ ಪತ್ನಿ ಪಕ್ಕದಲ್ಲಿಯೇ ಕುಳಿತು ನೋಡುತ್ತಿರುವುದು ಎಂದು ದೂರಿನಲ್ಲಿ ತಿಳಿಸಿದ್ದಾಳೆ.
 
ಆರೋಪಿ ಪ್ರಭು ರಾಮಮೂರ್ತಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :