ವಾಷಿಂಗ್ಟನ್ : ಡೇಂಜರಸ್ ಫಾರೆಸ್ಟ್ನಂತಹ ಸಿನಿಮಾಗಳಲ್ಲಿ ವಿವಿಧ ರೀತಿಯ ಕೀಟಗಳು ಮನುಷ್ಯನನ್ನು ಭೀಕರವಾಗಿ ತಿಂದು ಹತ್ಯೆ ಮಾಡುತ್ತವೆ. ಹಾಗೆಯೇ ಸಿನಿಮೀಯ ಮಾದರಿಯಲ್ಲಿ ಕೀಟಗಳು ಮತ್ತು ತಿಗಣೆ ಕೈದಿಯೊಬ್ಬನನ್ನ ಜೀವಂತವಾಗಿ ತಿಂದುಹಾಕಿರುವ ಭಯಾನಕ ಘಟನೆ ನಡೆದಿದೆ. ಅಮೆರಿಕದ ಅಟ್ಲಾಂಟಾದ ಜೈಲಿನಲ್ಲಿದ್ದ 35 ವರ್ಷದ ಕೈದಿಯೊಬ್ಬನನ್ನು ಕೀಟಗಳು ಮತ್ತು ತಿಗಣೆ ತಿಂದು ಹಾಕಿವೆ ಎಂದು ಸಂತ್ರಸ್ತರ ಕುಟುಂಬದ ವಕೀಲರು ಆರೋಪಿಸಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಮೃತ ವ್ಯಕ್ತಿಯ ಕುಟುಂಬವು ಈಗ ಅವರ