ನವದೆಹಲಿ: ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಪ್ರಮುಖ ಸೋಷಿಯಲ್ ಮೀಡಿಯಾಗಳಾದ ಫೇಸ್ ಬುಕ್, ಇನ್ ಸ್ಟಾಗ್ರಾಂ ಮತ್ತು ವ್ಯಾಟ್ಸಪ್ ಕಾರ್ಯಾಚರಣೆ ಸ್ಥಗಿತಗೊಂಡಿದೆ.ಇದರಿಂದ ಬಳಕೆದಾರರು ಗಲಿಬಿಲಿಗೊಳಗಾದ ಘಟನೆ ನಡೆದಿದೆ. ಸುಮಾರು 6 ಗಂಟೆಗಳ ಕಾಲ ಜಾಗತಿಕವಾಗಿ ಈ ಸೋಷಿಯಲ್ ಮೀಡಿಯಾ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದಾಗಿ ಟ್ವಿಟರ್ ನಲ್ಲಿ ಬಳಕೆದಾರರು ಮೆಮೆಗಳ ಮೂಲಕ ಫೇಸ್ ಬುಕ್ ಸಂಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದರು.ವ್ಯಾಟ್ಸಪ್ ನಲ್ಲಿ ಯಾವುದೇ ಸಂದೇಶ ಕಳುಹಿಸಲಾಗುತ್ತಿರಲಿಲ್ಲ ಮತ್ತು ಸ್ವೀಕೃತವಾಗುತ್ತಿರಲಿಲ್ಲ. ಇನ್ನು ಇನ್