ಪ್ಯಾಲೆಸ್ತೀನ್ ಜೊತೆಗಿನ ಸಂಘರ್ಷದ ನಡುವೆಯೂ ಭಾರತಕ್ಕೆ ನೆರವು ನೀಡುತ್ತಿರುವ ಇಸ್ರೇಲ್

ನವದೆಹಲಿ| Krishnaveni K| Last Modified ಸೋಮವಾರ, 17 ಮೇ 2021 (09:31 IST)
ನವದೆಹಲಿ: ಒಂದೆಡೆ ತನ್ನ ದೇಶದಲ್ಲೇ ವಿಪ್ಲವದ ವಾತಾವರಣವಿದ್ದರೂ ಇಸ್ರೇಲ್ ಸ್ನೇಹಿತ ರಾಷ್ಟ್ರ ಭಾರತಕ್ಕೆ ನೆರವು ನೀಡುವುದನ್ನು ಮಾತ್ರ ಮರೆತಿಲ್ಲ.
 

ಪ್ಯಾಲೆಸ್ತೀನ್ ಜೊತೆಗಿನ ಸಂಘರ್ಷದ ನಡುವೆಯೂ ಇಸ್ರೇಲ್ ಭಾರತಕ್ಕೆ ಕೊರೋನಾ ವಿರುದ್ಧ ಹೋರಾಡಲು ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಕಳುಹಿಸಿಕೊಟ್ಟಿದೆ.
 
ಆಕ್ಸಿಜನ್ ಸಿಲಿಂಡರ್, ಔಷಧ ಸೇರಿದಂತೆ ಅಗತ್ಯ ವೈದ್ಯಕೀಯ ಸೇವೆಗಳನ್ನು ಹೊತ್ತ ವಿಶೇಷ ವಿಮಾನ ದೆಹಲಿಗೆ ಬಂದಿಳಿದಿದೆ. ತಮ್ಮಲ್ಲೇ ಸಂಕಷ್ಟವಿದ್ದರೂ ಮಿತ್ರರಾಷ್ಟ್ರಕ್ಕೆ ಸಹಾಯ ಮಾಡಲು ಇಸ್ರೇಲ್ ಹಿಂದೇಟು ಹಾಕಿಲ್ಲ ಎಂದು ಭಾರತದಲ್ಲಿನ ಇಸ್ರೇಲ್ ರಾಯಭಾರಿ ರೋನ್ ಮಲ್ಕಾ ಟ್ವೀಟ್ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :