ಕೀವ್ : ರಷ್ಯಾ ಪಡೆಗಳು ನನ್ನನ್ನು ಹಾಗೂ ನನ್ನ ಕುಟುಂಬವನ್ನು ಸೆರೆ ಹಿಡಿಯಲು ಬಹಳ ಹತ್ತಿರಕ್ಕೆ ಬಂದಿದ್ದವು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಅನುಭವಿಸಿದ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.ಅಲ್ಲಿನ ಶಬ್ಧ ಜೋರಾಗಿತ್ತು. ಭಾರೀ ಸ್ಫೋಟಗಳು ಅಲ್ಲಿ ಸಂಭವಿಸಿದ್ದವು. ನಾನಿದ್ದ ಸ್ಥಳ ಸುರಕ್ಷಿತವಲ್ಲ ಎಂಬುದು ತಕ್ಷಣವೇ ನನಗೆ ಖಾತ್ರಿಯಾಯಿತು. ರಷ್ಯಾ ಪಡೆಗಳು ನನ್ನನ್ನು ಹಾಗೂ ನನ್ನ ಕುಟುಂಬವನ್ನು ಕೊಲ್ಲಲು ಮುಂದಾಗಿವೆ ಎಂದು ನನಗೆ ಮಾಹಿತಿ ದೊರಕಿತು ಎಂದು