ಇಸ್ಲಾಮಾಬಾದ್ : ಭಾರತ ಹಾಗೂ ಪಾಕಿಸ್ತಾನದ ನಡುವೆ ಇರುವ ಕಾಶ್ಮೀರದ ವಿವಾದವನ್ನು ವಿಶ್ವಸಂಸ್ಥೆಯ ನಿರ್ಣಯಗಳ ಪ್ರಕಾರ ಪರಿಹರಿಸಬೇಕೆಂದು ಚೀನಾ ಶನಿವಾರ ಹೇಳಿದೆ. ಚೀನಾದ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ 2 ದಿನಗಳ ಭೇಟಿಗೆ ಪಾಕಿಸ್ತಾನಕ್ಕೆ ತೆರಳಿದ್ದಾರೆ. ಇದು ಪಾಕಿಸ್ತಾನಕ್ಕೆ ಅವರ ಮೊದಲ ಪ್ರವಾಸವಾಗಿದೆ. ಅವರು ಶನಿವಾರ ತಮ್ಮ ಪಾಕಿಸ್ತಾನದ ಸಹವರ್ತಿ ಬಿಲಾವಲ್ ಭುಟ್ಟೋ ಜರ್ದಾರಿ ಅವರೊಂದಿ ಸಭೆ ನಡೆಸಿದ್ದಾರೆ.ವರದಿಗಳ ಪ್ರಕಾರ ಸಭೆಯಲ್ಲಿ ರಾಜಕೀಯ, ಕಾರ್ಯತಂತ್ರ, ಆರ್ಥಿಕ, ರಕ್ಷಣಾ ಭದ್ರತೆ, ಶಿಕ್ಷಣ