ವಾಷಿಂಗ್ಟನ್(ಜು.16): ಜಗತ್ತಿನಾದ್ಯಂತ ಕೊರೋನಾ ಕೇಸು ಹಾಗೂ ಸಾವಿನ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದ್ದು, 3ನೇ ಅಲೆ ತೀವ್ರಗೊಳ್ಳುವ ಭಾರಿ ಆತಂಕ ಎದುರಾಗಿದೆ. ಸತತ ಒಂಭತ್ತು ವಾರಗಳ ಕಾಲ ಜಗತ್ತಿನಲ್ಲಿ ಒಟ್ಟಾರೆ ನಿತ್ಯ ವರದಿಯಾಗುವ ಕೋವಿಡ್ ಕೇಸು ಹಾಗೂ ಸಾವಿನ ಸಂಖ್ಯೆ ಇಳಿಕೆಯಾಗುತ್ತಿತ್ತು. ಆದರೆ, ಕಳೆದ ವಾರ ಅದು ಏರಿಕೆಯಾಗಿದೆ. ಇನ್ನೂ 2ನೇ ಅಲೆಯ ಅಂತ್ಯದಲ್ಲಿರುವ ಭಾರತಕ್ಕೆ ಇದು ಎಚ್ಚರಿಕೆಯ ಗಂಟೆಯಾಗಿದೆ.* ಸತತ 9 ವಾರಗಳ ಇಳಿಕೆಯ ನಂತರ ಕಳೆದ ವಾರ ಏರಿಕೆ