ಡೆಹ್ರಾಡೂನ್ : ಉತ್ತರಾಖಂಡದ ಪಿಥೋರಗಢದಲ್ಲಿ ಭೂಕುಸಿತ ಉಂಟಾದ ಪರಿಣಾಮ ರಸ್ತೆ ಕೊಚ್ಚಿಹೋಗಿದ್ದು, 300 ಮಂದಿ ಪ್ರಯಾಣಿಕರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಲಖನ್ಪುರ ಬಳಿಯ ಧಾರ್ಚುಲದಿಂದ 45 ಕಿಮೀ ಎತ್ತರದ ಲಿಪುಲೇಖ್ – ತವಾಘಾಟ್ ರಸ್ತೆಗೆ ಬೆಟ್ಟ ಕುಸಿದು ಬಿದ್ದಿದ್ದು, 100 ಮೀಟರ್ ರಸ್ತೆ ಕೊಚ್ಚಿ ಹೋಗಿದೆ. ಭೂಕುಸಿತದ ಪರಿಣಾಮ ಧಾರ್ಚುಲ ಮತ್ತು ಗುಂಜಿಯಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಪಿಥೋರಗಢದ ಹೊರವಲಯದಲ್ಲಿ, ಧಾರ್ಚುಲಾ ಮೇಲೆ 45 ಕಿ.ಮೀ ದೂರದಲ್ಲಿರುವ ಲಿಪುಲೇಖ್-ತವಾಘಾಟ್ ಮೋಟಾರು ರಸ್ತೆ, ಲಖನ್ಪುರ