ವಾಷಿಂಗ್ಟನ್ : ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಜೀವ ಬೆದರಿಕೆ ಒಡ್ಡಿರುವ ವೀಡಿಯೋ ರೆಕಾರ್ಡ್ ಪೋಸ್ಟ್ ಹಾಕಿದ್ದಕ್ಕೆ ಇರಾನ್ ಮುಖ್ಯ ನಾಯಕನಿಗೆ ಸಂಬಂಧಿಸಿದ ಟ್ವಿಟ್ಟರ್ ಖಾತೆಯನ್ನು ನಿಷೇಧಿಸಲಾಗಿದೆ ಎಂದು ಟ್ವಿಟ್ಟರ್ ತಿಳಿಸಿದೆ.ಎರಡು ವರ್ಷಗಳ ಹಿಂದೆ ಬಾಗ್ದಾದ್ನಲ್ಲಿ ಡೊನಾಲ್ಡ್ ಟ್ರಂಪ್ ಡ್ರೋನ್ ದಾಳಿಗೆ ಆದೇಶಿಸಿದ್ದರು. ಈ ವೇಳೆ ಇರಾನ್ನ ಉನ್ನತ ಕಮಾಂಡರ್ ಜನರಲ್ ಖಾಸಿಂ ಸೊಲೈಮನಿಯನ್ನು ಹತ್ಯೆ ಮಾಡಲಾಗಿತ್ತು. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲಾಗುವುದು ಎಂಬಂತೆ ಮಾನವರಹಿತ ವಿಮಾನವನ್ನು ತೋರಿಸುವ ಆ್ಯನಿಮೇಟೆಡ್