ವಿಯೆನ್ನಾ : ಕೊರೊನಾ ವೈರಸ್ ಸೋಂಕು ಮರೆಯಾಗುತ್ತಿದೆ ಎಂದು ಜನರು ಮೈಮರೆಯುತ್ತಿದ್ದಾರೆ. ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗುತ್ತಿರುವುದು ಇದಕ್ಕೆ ಕಾರಣ. ಇನ್ನೊಂದೆಡೆ ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಕೋವಿಡ್ 19 ಕಡಿಮೆಯಾಗುತ್ತಿದೆ ಎಂದು ನಾವು ಮೈಮರೆಯುವಂತಿಲ್ಲ ಎಂಬುದನ್ನು ಯುರೋಪಿಯನ್ ದೇಶಗಳ ಈಗಿನ ಸನ್ನಿವೇಶ ಆಘಾತ ಮೂಡಿಸುವಂತಿದೆ. ಕೊರೊನಾ ವೈರಸ್ ಪ್ರಕರಣಗಳಲ್ಲಿ ಭಾರಿ ಏರಿಕೆ ಹಿನ್ನೆಲೆಯಲ್ಲಿ ಆಸ್ಟ್ರಿಯಾ ಲಾಕ್ಡೌನ್ ಘೋಷಿಸಿದೆ. ಅಲ್ಲದೆ, ದೇಶದ ಪ್ರತಿಯೊಬ್ಬರೂ