ತೋಳದ ಮುಖವಾಡ ಹಾಕಿ ಬೀದಿಯಲ್ಲಿ ನಡೆದಿದ್ದಕ್ಕೆ ವ್ಯಕ್ತಿ ಅರೆಸ್ಟ್!

ಇಸ್ಲಾಮಾಬಾದ್| Krishnaveni K| Last Modified ಶನಿವಾರ, 2 ಜನವರಿ 2021 (10:18 IST)
ಇಸ್ಲಾಮಾಬಾದ್: ಕೊರೋನಾ ಸಮಯದಲ್ಲಿ ಮಾಸ್ಕ್ ಬಳಕೆ ಕಡ್ಡಾಯ. ಆದರೆ ಪಾಕಿಸ್ತಾನದಲ್ಲಿ ಮಾಸ್ಕ್ ಹಾಕಿ ಬೀದಿಯಲ್ಲಿ ಓಡಾಡಿದ ವ್ಯಕ್ತಿಯೊಬ್ಬ ಅರೆಸ್ಟ್ ಆಗಿದ್ದಾನೆ! ಅದಕ್ಕೆ ಕಾರಣ ಆತ ಹಾಕಿದ್ದು ಸಾಮಾನ್ಯ ಮಾಸ್ಕ್ ಅಲ್ಲ, ತೋಳದ ಮುಖವಾಡದ ಮಾಸ್ಕ್.

 
ಪಾಕಿಸ್ತಾನದ ಪೇಶಾವರದಲ್ಲಿ ಜನರನ್ನು ಮೋಜಿಗಾಗಿ ಭಯಪಡಿಸಲು ವ್ಯಕ್ತಿಯೊಬ್ಬ ತೋಳದಂತೆ ಮಾಸ್ಕ್ ಧರಿಸಿ ಬೀದಿಯಲ್ಲಿ ಓಡಾಡಿದ್ದಕ್ಕೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ವಿಚಾರವನ್ನು ಪಾಕ್ ಪತ್ರಕರ್ತ ಒಮರ್ ಆರ್ ಖುರೇಶಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದೆ.
ಇದರಲ್ಲಿ ಇನ್ನಷ್ಟು ಓದಿ :