28 ಪತ್ನಿಯರ ಮುಂದೆ 37 ನೇ ಮದುವೆಯಾದ ಪತಿರಾಯ!

ನವದೆಹಲಿ| Krishnaveni K| Last Modified ಬುಧವಾರ, 9 ಜೂನ್ 2021 (09:52 IST)
ನವದೆಹಲಿ: ಇಲ್ಲೊಬ್ಬ ವ್ಯಕ್ತಿ ಮದುವೆಯಾಗುವುದರಲ್ಲೂ ದಾಖಲೆ ಮಾಡಿದ್ದಾನೆ! ಈಗಾಗಲೇ 28 ಪತ್ನಿಯರನ್ನು ಹೊಂದಿರುವ ವ್ಯಕ್ತಿ 37 ನೇ ಬಾರಿ ಮದುವೆಯಾಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಈತನಿಗೆ ಈಗಾಗಲೇ 28 ಪತ್ನಿಯರು, 35 ಮಕ್ಕಳು, 126 ಮೊಮ್ಮಕ್ಕಳಿದ್ದಾರೆ. ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ  ಟ್ವೀಟ್ ಮಾಡಿದ್ದಾರೆ.
 
ಆದರೆ ಈ ವ್ಯಕ್ತಿ ಯಾರು, ಈ ಪ್ರಕರಣ ನಡೆದಿರುವುದು ಎಲ್ಲಿ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ. ಆದರೆ ನೆಟ್ಟಿಗರು ಮಾತ್ರ ಈತನ ‘ಸಾಹಸ’ ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :