Widgets Magazine

ಕಮಲ್ ಹಾಸನ್`ಗೆ ತಿರುಗೇಟು ನೀಡಿದ ಅರುಣ್ ಜೇಟ್ಲಿ

ನವದೆಹಲಿ| venu| Last Updated: ಸೋಮವಾರ, 5 ಜೂನ್ 2017 (19:56 IST)
ಜಿಎಸ್`ಟಿ ಮೂಲಕ ಚಲನಚಿತ್ರಗಳ ಮೇಲೆ ಶೇ. 28ರಷ್ಟು ತೆರಿಗೆ ವಿಧಿಸುವ ಕೇಂದ್ರದ ನಿರ್ಧಾರದ ವಿರುದ್ಧ ಧ್ವನಿ ಎತ್ತಿದ್ದ ಸೂಪರ್ ಸ್ಟಾರ್ ಕಮಲ್ ಹಾಸನ್`ಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿರುಗೇಟು ನೀಡಿದ್ದಾರೆ.
 

ಮಾಧ್ಯಮಗಳನ್ನ ಬಳಸಿಕೊಂಡು ಪ್ರಚಾರ ಮಾಡಿ, ಒತ್ತಡ ಹೇರುವುದರಿಂದ ಯಾವುದೇ ಬದಲಾವಣೆ ಆಗಲ್ಲ ಎಂದಿದ್ದಾರೆ. ನಾವು ಪ್ರತಿಯೊಬ್ಬರ ಪ್ರಾತಿನಿಧ್ಯವನ್ನ ಗಮನದಲ್ಲಿರಿಸಿಕೊಂಡಿದ್ದೇವೆ. ಇದೀಗ, ಸರಿ ಸುಮಾರು ಶೇ. 29.1ರಷ್ಟು ಮನರಂಜನಾ ತೆರಿಗೆ ವಿಧಿಸಲಾಗುತ್ತಿದೆ. ಜಿಎಸ್`ಟಿ ಜಾರಿ ಬಳಿಕ ಶೇ.28ರಷ್ಟು ಬೀಳಲಿದೆ ಎಂದು ಸಮರ್ಥನೆ ನೀಡಿದ್ದಾರೆ.
 
ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ವಿರುದ್ಧ ಕಳೆದ ವಾರ ಆಕ್ರೋಶ ವ್ಯಕ್ತಪಡಿಸಿದ್ದ ಕಮಲ್ ಹಾಸನ್, ಮನರಂಜನಾ ತೆರಿಗೆ ಕಡಿತಗೊಳಿಸುವಂತೆ ಒತ್ತಾಯಿಸಿದ್ದರು. ನಾವೇನು ಬ್ರಿಟೀಷರ ಈಸ್ಟ್ ಇಂಡಿಯಾ ಕಂಪನಿಯ ಆಡಳಿತದಲ್ಲಿದ್ದೇವಾ..? ಎಂದು ಕಟು ಶಬ್ದಗಳಿಂದ ಪ್ರಶ್ನಿಸಿದ್ದರು.
 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

//kannada.
fantasycricket.webdunia.com/
 



ಇದರಲ್ಲಿ ಇನ್ನಷ್ಟು ಓದಿ :