ವಾಷಿಂಗ್ಟನ್ : ಟ್ವಿಟ್ಟರ್ನಲ್ಲಿ ಹೊಸ ಹೊಸ ಫೀಚರ್ಗಳನ್ನು ತರುವಲ್ಲಿ ಗಮನಹರಿಸುತ್ತಿರುವ ಸಿಇಒ ಎಲೋನ್ ಮಸ್ಕ್ ಮೆಸೆಜಿಂಗ್ ಪ್ಲಾಟ್ಫಾರ್ಮ್ ವಾಟ್ಸಪ್ ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ. ವಾಟ್ಸಪ್ ಅನ್ನು ನಂಬಬೇಡಿ ಎಂಬ ಎಚ್ಚರಿಕೆಯನ್ನು ಬಳಕೆದಾರರಿಗೆ ನೀಡಿದ್ದಾರೆ. ವಾಟ್ಸಪ್ ಅನ್ನು ಸಕ್ರಿಯವಾಗಿ ಬಳಸಲಾಗುತ್ತಿಲ್ಲವಾದರೂ ತಾವು ಮಲಗಿದ್ದಾಗ ಬ್ಯಾಕ್ಗ್ರೌಂಡ್ನಲ್ಲಿ ಮೈಕ್ರೋಫೋನ್ ಕಾರ್ಯನಿರ್ವಹಿಸುತ್ತಿರುತ್ತದೆ ಎಂದು ಟ್ವಿಟ್ಟರ್ನ ಎಂಜಿನಿಯರ್ ಒಬ್ಬರು ಕಳವಳ ವ್ಯಕ್ತಪಡಿಸಿದ್ದರು.ಇದಕ್ಕೆ ಟ್ವಿಟ್ಟರ್ ಸಿಇಒ ಎಲೋನ್ ಮಸ್ಕ್ ವಾಟ್ಸಪ್ ಅನ್ನು ನಂಬೋದು ಅಸಾಧ್ಯ ಎಂದಿದ್ದಾರೆ.