ಅಥೆನ್ಸ್ : ಅಗತ್ಯಕ್ಕಿಂತ ಹೆಚ್ಚು ವಲಸಿಗರು ಪ್ರಯಾಣಿಸುತ್ತಿದ್ದ ಹಡಗು ಮುಳುಗಿ 79 ಮಂದಿ ಜಲಸಮಾಧಿಯಾಗಿದ್ದು, ನೂರಾರು ಮಂದಿ ನಾಪತ್ತೆಯಾಗಿರುವ ಘಟನೆ ಗ್ರೀಸ್ನ ಕರಾವಳಿ ಭಾಗದಲ್ಲಿ ನಡೆದಿದೆ. ಜೂನ್ 14ರಂದು ರಾತ್ರಿ ಗ್ರೀಸ್ ಕರಾವಳಿಯಿಂದ ಯುರೋಪ್ನತ್ತ ಹೊರಟಿದ್ದ ಹಡಗಿನಲ್ಲಿ ನೂರಾರು ಮಂದಿ ಪ್ರಯಾಣಿಸುತ್ತಿದ್ದರು. ಮೀನುಗಾರಿಕೆ ಹಡಗಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜನರನ್ನ ಕೂರಿಸಿದ್ದರಿಂದ ಹಡಗು ಮುಳುಗಡೆಯಾಗಿದೆ ಎಂದು ತಿಳಿದುಬಂದಿದೆ. ಯುರೋಪಿಯನ್ ರಕ್ಷಣಾ ತಂಡದ ಪ್ರಕಾರ ಸುಮಾರು 750 ಮಂದಿ ಹಡಗಿನಲ್ಲಿದ್ದರು ಎನ್ನಲಾಗಿದೆ. ಆದ್ರೆ