Widgets Magazine

ಪಾಕಿಸ್ತಾನದಲ್ಲಿ ಪೆಟ್ರೋಲ್, ಡೀಸೆಲ್ ಗಿಂತ ದುಬಾರಿಯಾಗಿದೆ ಹಾಲು

ಕರಾಚಿ| pavithra| Last Modified ಬುಧವಾರ, 11 ಸೆಪ್ಟಂಬರ್ 2019 (07:18 IST)
ಕರಾಚಿ : ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಕ್ಕಿಂತ ಹಾಲಿನ ಗಗನಕ್ಕೇರಿದೆಯಂತೆ.
ಮಂಗಳವಾರ ಮೊಹರಂ ಆಚರಣೆ ದಿನದಂದು ನಗರದ ವಿವಿಧೆಡೆ ಹಾಲು, ಹಣ್ಣಿನ ರಸ, ತಂಪಾದ ನೀರು ನೀಡಲಾಗುತ್ತದೆ. ಆ ಕಾರಣಕ್ಕೆ ಕರಾಚಿ ಹಾಗೂ ಸಿಂಧ್ ಪ್ರಾಂತ್ಯದಲ್ಲಿ ಒಂದು ಲೀಟರ್ ಹಾಲನ್ನು 140 ರುಪಾಯಿಗೆ (ರುಪಾಯಿ) ಮಾರಲಾಗಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.


ಎರಡು ದಿನದ ಹಿಂದಷ್ಟೇ ಪೆಟ್ರೋಲ್ ಪ್ರತಿ ಲೀಟರ್ ಗೆ 113 ರುಪಾಯಿಯಂತೆ ಹಾಗೂ ಡೀಸೆಲ್ ಲೀಟರ್ ಗೆ 91 ರುಪಾಯಿಯಂತೆ ಮಾರಾಟ ಆಗುತ್ತಿದ್ದರೆ, ಒಂದು ಲೀಟರ್ ಹಾಲನ್ನು 140 ರುಪಾಯಿಗೆ ಮಾರಲಾಗಿದೆ ಎನ್ನಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :