ನೈರೋಬಿ: ಕೀನ್ಯಾದಲ್ಲಿ ರೂಪದರ್ಶಿಯೊಬ್ಬಳು ತನ್ನ ಪ್ರಿಯಕರನನ್ನೇ 22 ಬಾರಿ ಇರಿದು ಸಾಯಿಸಿದ ಘಟನೆ ನಡೆದಿದೆ. ಇದಕ್ಕೆ ಮುಖ್ಯ ಕಾರಣ ಆಕೆಯ ಪ್ರಿಯಕರ ಎಚ್.ಐ.ವಿ ಸೋಂಕಿತನಾಗಿರುವುದಂತೆ. ರುತ್ ಕಮಂದೆ ಎಂಬ ರೂಪದರ್ಶಿ ತನ್ನ ಪ್ರಿಯಕರ ಫರೀದ್ ನ ಹಾಸಿಗೆಯಡಿಯಲ್ಲಿ ಎಚ್ ಐವಿ ಚಿಕಿತ್ಸೆಗೆ ಸಂಬಂಧಿಸಿದ ಕಾರ್ಡ್ ವೊಂದನ್ನು ನೋಡಿದ ನಂತರ ಅವರಿಬ್ಬರ ಮಧ್ಯೆ ಜಗಳ ನಡೆದಿತ್ತು. ಈ ವಿಷಯ ಹೊರಗಡೆ ಗೊತ್ತಾದರೆ, ನನ್ನನ್ನು ಸಾಯಿಸಿ ಆತನೂ ಸಾಯುವುದಾಗಿ ಹೇಳಿದ. ನನ್ನನ್ನು ಕಾಪಾಡಿಕೊಳ್ಳುವುದಕ್ಕಾಗಿ