ವಾಷಿಂಗ್ಟನ್(ಆ.02): ಈಗಾಗಲೇ 3.5 ಕೋಟಿ ಸೋಂಕಿತರು ಮತ್ತು 6.30 ಲಕ್ಷ ಜನರ ಸಾವಿನಿಂದ ತತ್ತರಿಸಿರುವ ಅಮೆರಿಕ ಮುಂದಿನ ದಿನಗಳಲ್ಲಿ ಇನ್ನಷ್ಟುನೋವು ಮತ್ತು ಯಾತನೆಯನ್ನು ಅನುಭವಿಸಬೇಕಾಗಿ ಬರಲಿದೆ ಎಂದು ದೇಶದ ಖ್ಯಾತ ಸಾಂಕ್ರಾಮಿಕ ರೋಗ ತಜ್ಞ ಡಾ. ಆ್ಯಂಟೋನಿ ಫೌಸಿ ಎಚ್ಚರಿಕೆ ನೀಡಿದ್ದಾರೆ. * ಅಮೆರಿಕದ ಖ್ಯಾತ ಸಾಂಕ್ರಾಮಿಕ ರೋಗ ತಜ್ಞರ ಎಚ್ಚರಿಕೆ * ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಾಯ ಕಾದಿದೆ: ಡಾ.ಫೌಸಿ ದೇಶದಲ್ಲಿ ಮತ್ತೆ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ