ರೋಮ್ : 20 ವರ್ಷಗಳಿಂದ ಮಕ್ಕಳ ಅಶ್ಲೀಲ ಫೋಟೋ ಮತ್ತು ವೀಡಿಯೋಗಳನ್ನು ಚಿತ್ರಿಸುತ್ತಿದ್ದ 49 ವರ್ಷದ ಸಂಗೀತಗಾರ ಇಂದು ಪೋಲೀಸರಿಗೆ ಸಿಕ್ಕಿಬಿದ್ದಿದ್ದಾನೆ.ವಯಸ್ಕರೊಂದಿಗೆ ಮಕ್ಕಳು ಲೈಂಗಿಕ ಕ್ರಿಯೆಗಳಲ್ಲಿ ತೊಡಗಿಕೊಳ್ಳುವ ಲಕ್ಷಗಳಷ್ಟು ಫೋಟೋ ಮತ್ತು ವೀಡಿಯೋಗಳನ್ನು 49 ವರ್ಷದ ಸಂಗೀತಗಾರ ಹೊಂದಿದ್ದು, ಆತನನ್ನು ಇಟಾಲಿಯನ್ ಪೊಲೀಸರು ಇಂದು ಬಂಧಿಸಿದ್ದಾರೆ.ಇಟಲಿಯ ಮಾರ್ಚೆ ಪ್ರದೇಶದ ಕರಾವಳಿ ನಗರವಾದ ಅಂಕೋನಾದಲ್ಲಿ ಸಂಗೀತಗಾರನಾಗಿದ್ದ ವ್ಯಕ್ತಿ ಸುಮಾರು 20 ವರ್ಷಗಳಿಂದ ಮಕ್ಕಳನ್ನು ಬಳಸಿಕೊಂಡು ಅಶ್ಲೀಲ ವೀಡಿಯೋ ಮತ್ತು ಫೋಟೋಗಳ್ನು ಚಿತ್ರಿಸುತ್ತಿದ್ದ.