Widgets Magazine

ಭಾರತದ ವಿರುದ್ಧ ಕತ್ತಿಮಸೆಯುತ್ತಿರುವ ನೇಪಾಳ ಪ್ರಧಾನಿ ವಿರುದ್ಧ ಸ್ವಪಕ್ಷೀಯರಿಂದಲೇ ಆಕ್ರೋಶ

ಕಠ್ಮಂಡು| Krishnaveni K| Last Modified ಶುಕ್ರವಾರ, 26 ಜೂನ್ 2020 (10:12 IST)
ಕಠ್ಮಂಡು: ಚೀನಾ ಕೈಗೊಂಬೆಯಾಗಿರುವ ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ವಿರುದ್ಧ ಸ್ವದೇಶಿಯರಿಂದಲೇ ಆಕ್ರೋಶ ವ್ಯಕ್ತವಾಗಿದೆ.

 
ಸ್ವಪಕ್ಷದವರೇ ಓಲಿ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಆಡಳಿತದ ಎಲ್ಲಾ ವಿಭಾಗಗಳಲ್ಲಿ ವಿಫಲರಾಗಿರುವ ಓಲಿ ರಾಜೀನಾಮೆ ನೀಡಬೇಕು ಇಲ್ಲದೇ ಇದ್ದರೆ ಪಕ್ಷ ಒಡೆಯುವುದಾಗಿ ಕಮ್ಯುನಿಷ್ಟ್ ಪಕ್ಷದ ನೇತಾರ ಪುಷ್ಪ ಕಮಾಲ್ ದಹಾಲ್ ಆಗ್ರಹಿಸಿದ್ದಾರೆ.
 
ಭಾರತದೊಂದಿಗೆ ಗಡಿ ಕಿರಿಕ್ ಜತೆಗೆ ಚೀನಾದ ತಾಳಕ್ಕೆ ತಕ್ಕಂತೆ ಕುಣಿದು ತಮ್ಮ ದೇಶಕ್ಕೇ ಸಂಚಕಾರ ತಂದಿರುವ ಓಲಿ ವಿರುದ್ಧ ಎಲ್ಲೆಡೆ ಆಕ್ರೋಶವಿದೆ.
ಇದರಲ್ಲಿ ಇನ್ನಷ್ಟು ಓದಿ :