ನವದೆಹಲಿ: ಗಡಿಯಲ್ಲಿ ಭಾರತದ ನೆರೆಯ ರಾಷ್ಟ್ರ ನೇಪಾಳದ ತಂಟೆ ಮಿತಿಮೀರಿದೆ. ನಕ್ಷೆ ಬದಲಾವಣೆ ವಿಚಾರದಲ್ಲಿ ಭಾರತದೊಂದಿಗೆ ಕಿರಿಕ್ ಮಾಡಿಕೊಂಡಿರುವ ನೇಪಾಳ ಭಾರತೀಯರ ಮೇಲೆ ಗುಂಡಿನ ಮಳೆಗೆರೆದು ವಿವಾದದ ಬೆಂಕಿಗೆ ತುಪ್ಪ ಸುರಿದಿದೆ.ನಿನ್ನೆ ಬೆಳಿಗ್ಗೆಯಷ್ಟೇ ಚೀನಾ-ಭಾರತ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವುದಾದರೆ ನಮಗೆ ಯಾಕೆ ಸಾಧ್ಯವಿಲ್ಲ ಎಂದಿತ್ತು. ಆದರೆ ಇದರ ನಡುವೆ ಇಂತಹದ್ದೊಂದು ಘಟನೆ ನಡೆದಿರುವುದು ಉದ್ವಿಗ್ನ ಪರಿಸ್ಥಿತಿ ಹೆಚ್ಚಲು ಕಾರಣವಾಗಿದೆ.ಈ ಘಟನೆ ನಡೆದಿರುವುದು ನೇಪಾಳದ ಗಡಿಯೊಳಗೆ. ನೇಪಾಳದತ್ತ ಸಾಗುತ್ತಿದ್ದ ಮೂವರು