ನ್ಯೂಜಿಲ್ಯಾಂಡ್ ಸರ್ಕಾರದ ಬಿಗಿ ನಿಯಮ?

ನ್ಯೂಜಿಲ್ಯಾಂಡ್| Ramya kosira| Last Modified ಸೋಮವಾರ, 11 ಅಕ್ಟೋಬರ್ 2021 (13:39 IST)
ನ್ಯೂಜಿಲ್ಯಾಂಡ್ : ಡಿಸೆಂಬರ್ 1ರ ಒಳಗೆ ಎರಡೂ ಡೋಸ್ ಕೊವಿಡ್ ಲಸಿಕೆ ಹಾಕಿಸಿಕೊಳ್ಳದಿದ್ದರೆ ಉದ್ಯೋಗ ನಿರಾಕರಿಸುವುದಾಗಿ ಕೊವಿಡ್ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ತಿಳಿಸಿದೆ.

ವೈದ್ಯರು, ದಾದಿಯರು ಸೇರಿದಂತೆ ಆರೊಗ್ಯ ಕ್ಷೇತ್ರದ ಎಲ್ಲ ಸಿಬ್ಬಂದಿಗೂ ಈ ನಿಯಮ ಅನ್ವಯವಾಗಲಿದೆ ಎಂದು ನ್ಯೂಜಿಲ್ಯಾಂಡ್ ತಿಳಿಸಿದೆ.
ಕೊವಿಡ್ ಸೋಂಕು ಹರಡಬಹುದಾದ ಯಾವುದೇ ಸಾಧ್ಯತೆಗಳನ್ನೂ ಬಿಡುವುದಿಲ್ಲ. ಕೊವಿಡ್ ತಡೆಯಲು ಕೈಗೊಳ್ಳಬಹುದಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳುವುದಾಗಿ ಕೊವಿಡ್ 19ಕ್ಕೆ ಸಂಬಂಧಿಸಿದ ಸಚಿವ ಮತ್ತು ಶಿಕ್ಷಣ ಸಚಿವರೂ ಆಗಿರುವ ಕ್ರಿಸ್ ಹಿಪ್ಕಿನ್ಸ್ ಸೂಚಿಸಿದ್ದಾರೆ. ಅಲ್ಲದೇ ಮಕ್ಕಳ ಜತೆಗೆ ಸಂಪರ್ಕ ಬೆಳೆಸುವ ಶಿಕ್ಷಕರು ಜನವರಿ 1ರ ಒಳಗೆ ಎರಡೂ ಡೋಸ್ ಕೊವಿಡ್ ಲಸಿಕೆ ಪಡೆದಿರಬೇಕು ಎಂದು ಸಹ ನ್ಯೂಜಿಲ್ಯಾಂಡ್ ಸರ್ಕಾರ ಸೂಚಿಸಿದೆ.
95 ಕೋಟಿ ಡೋಸ್ ಕೊವಿಡ್ ಲಸಿಕೆ ನೀಡಿಕೆ, ಮತ್ತೊಂದು ಮೈಲುಗಲ್ಲು ಸಾಧಿಸಿದ ಭಾರತ
ಭಾನುವಾರದವರೆಗೆ ಭಾರತದಲ್ಲಿ 95 ಕೋಟಿಗೂ ಹೆಚ್ಚು ಕೊರೊನಾವೈರಸ್ ಲಸಿಕೆಗಳನ್ನು ನೀಡಲಾಗಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವಿಟರ್ನಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದು ಭಾರತವು 100 ಕೋಟಿ ಕೊವಿಡ್ -19 ಲಸಿಕೆಗಳನ್ನು ನೀಡಲು ಹತ್ತಿರವಾಗಿದೆ ಎಂದು ಹೇಳಿದರು. “ವಿಶ್ವದ ಅತಿದೊಡ್ಡ ಯಶಸ್ವಿ ವ್ಯಾಕ್ಸಿನೇಷನ್ ಅಭಿಯಾನವು ಭರದಿಂದ ಸಾಗಿದೆ. ಭಾರತವು 95 ಕೋಟಿ ಕೊವಿಡ್ 19 ಲಸಿಕೆ ಡೋಸ್ಗಳ ನೀಡಿಕೆ ಪೂರ್ಣಗೊಳಿಸಿದೆ. 100 ಕೋಟಿ ಲಸಿಕೆ ಡೋಸ್ಗಳ ನಿರ್ವಹಣೆ ವೇಗವಾಗಿ ಸಾಗುತ್ತಿದೆ. ಶೀಘ್ರವಾಗಿ ಲಸಿಕೆ ಪಡೆಯಿರಿ ಮತ್ತು ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಅದೇ  ರೀತಿ ಮಾಡಲು ಪ್ರೋತ್ಸಾಹಿಸಿ!”ಎಂದು ಹೇಳಿದ್ದಾರೆ.
 
ಇದರಲ್ಲಿ ಇನ್ನಷ್ಟು ಓದಿ :