ನಿತ್ಯಾನಂದನ ‘ಕೈಲಾಸ ದೇಶ’ಕ್ಕೆ ಪ್ರತ್ಯೇಕ ವೀಸಾ, ವಿಮಾನ ವ್ಯವಸ್ಥೆ!

ನವದೆಹಲಿ| Krishnaveni K| Last Modified ಶುಕ್ರವಾರ, 18 ಡಿಸೆಂಬರ್ 2020 (10:33 IST)
ನವದೆಹಲಿ: ತಲೆಮರೆಸಿಕೊಂಡಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಈಗ ತನ್ನ ಕೈಲಾಸ ದ್ವೀಪದಲ್ಲಿ ಪ್ರತ್ಯೇಕ ರಾಷ್ಟ್ರ ರಚನೆಯಲ್ಲಿ ತೊಡಗಿಸಿಕೊಂಡಿದ್ದಾನೆ. ತನ್ನ ದೇಶಕ್ಕೆ ಪ್ರತ್ಯೇಕ ಕರೆನ್ಸಿ ರೂಪಿಸಿದ್ದ ನಿತ್ಯಾನಂದ ಈಗ ವೀಸಾ, ವಿಮಾನ ಯಾನದ ವ್ಯವಸ್ಥೆ ಮಾಡಿದ್ದಾನೆ.

 
ನಿತ್ಯಾನಂದನ ಕೈಲಾಸ ರಾಷ್ಟ್ರಕ್ಕೆ ಆಗಮಿಸುವವರಿಗೆ ವೀಸಾ ನೀಡಲಾಗುತ್ತದೆ. ಅಲ್ಲದೆ, ಇಲ್ಲಿಗೆ ಆಗಮಿಸಲು ಆಸ್ಟ್ರೇಲಿಯಾದಿಂದ ಪ್ರತ್ಯೇಕ ವಿಮಾನ ಯಾನದ ವ್ಯವಸ್ಥೆಯನ್ನೂ ಮಾಡಿದ್ದಾನೆ. ಈ ವಿಮಾನ ಯಾನ ವ್ಯವಸ್ಥೆಗೆ ‘ಗರುಡ’ ಎಂದು ನಾಮಕರಣ ಮಾಡಿದ್ದಾನೆ. ಇನ್ನು ತನ್ನ ರಾಷ್ಟ್ರಕ್ಕೆ ಬರುವವರಿಗೆ ಮೂರು ದಿನಕ್ಕಿಂತ ಹೆಚ್ಚು ದಿನ ಉಳಕೊಳ್ಳಲು ನಿತ್ಯಾನಂದ ಅವಕಾಶ ಕೊಟ್ಟಿಲ್ಲ.
ಇದರಲ್ಲಿ ಇನ್ನಷ್ಟು ಓದಿ :