ಲಂಡನ್ : ವಿಶ್ವಾದ್ಯಂತ ಕೊರೋನಾ ವೈರಸ್ಸಿನ ರೂಪಾಂತರಿ ತಳಿ ಒಮಿಕ್ರೋನ್ ಅಬ್ಬರಿಸುತ್ತಿರುವ ನಡುವೆಯೇ, ರೂಪಾಂತರಿಯಿಂದ ನಲುಗಿದ್ದ ಬ್ರಿಟನ್ನಲ್ಲಿ ಸೋಂಕು ಇಳಿಮುಖವಾಗುತ್ತಿದೆ.ಹೀಗಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಮುಂದಿನ ಗುರುವಾರದಿಂದ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿದಂತೆ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಲಾಗಿದ್ದ ಹೆಚ್ಚುವರಿ ನಿರ್ಬಂಧದ ಕ್ರಮಗಳನ್ನು ತೆಗೆದುಹಾಕಲು ನಿರ್ಧರಿಸಿದ್ದಾರೆ.ಬ್ರಿಟನ್ನಲ್ಲಿ ಒಮಿಕ್ರೋನ್ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ನಿತ್ಯ 2 ಲಕ್ಷದಷ್ಟು ದಾಖಲಾಗುತ್ತಿದ್ದ ಪ್ರಕರಣಗಳು ಈಗ ಸರಾಸರಿ 90 ಸಾವಿರದ ಆಸುಪಾಸಿಗೆ ಇಳಿದಿವೆ. ಹಿನ್ನೆಲೆಯಲ್ಲಿ