ಇಹಲೋಕ ತ್ಯಜಿಸಿದ ನೊಬೆಲ್ ಪ್ರಶಸ್ತಿ ವಿಜೇತ ವಿ.ಎಸ್.ನೈಪಾಲ್

ಲಂಡನ್, ಭಾನುವಾರ, 12 ಆಗಸ್ಟ್ 2018 (15:22 IST)

ಲಂಡನ್ : ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕ ಮತ್ತು ಕಾದಂಬರಿಕಾರ ವಿ.ಎಸ್.ನೈಪಾಲ್ (85) ಇಂದು ಮುಂಜಾನೆ ಲಂಡನ್‍ನಲ್ಲಿ ನಿಧನರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಈ ವಿಚಾರವನ್ನು ಅವರ ಪತ್ನಿ ಬ್ರಿಟಿಷ್ ಪ್ರೆಸ್ ಅಸೋಸಿಯೇಷನ್ ಗೆ ತಿಳಿಸಿದ್ದಾರೆ. ಭಾರತದ ರಾಜಕೀಯ, ಭ್ರಷ್ಟಾಚಾರ, ಸಾಮ್ರಾಜ್ಯ ಶಾಹಿ ಬಗ್ಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಇರುವ ಅಭಿಪ್ರಾಯಗಳನ್ನು ತಮ್ಮ ಕೃತಿಗಳ ಮೂಲಕ ಪರಿಚಯಿಸಿದ್ದ ನೈಪಾಲ್ 30ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.


2001ರಲ್ಲಿ 1ಮಿಲಿಯನ್ ಡಾಲರ್ ಮೊತ್ತದ ನೊಬೆಲ್ ಸಾಹಿತ್ಯ ಪಾರಿತೋಷಕವನ್ನು ಪಡೆದಿದ್ದ ಟ್ರಿನಿಡಾಡ್ ಸಂಜಾತ ನೈಪಾಲ್ ಅವರು, 1971ರಲ್ಲಿ ಬೂಕರ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದರು. 1990ರಲ್ಲಿ ಕ್ವೀನ್ ಎಲಿಜಬೆತ್ ಅವರು ನೈಪಾಲ್ ಅವರಿಗೆ 'ನೈಟ್ ಹುಡ್' ಗೌರವ ನೀಡಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಸಿಟಿವಿ ಜಖಂಗೊಳಿಸಿದ್ರು; ಸರಣಿ ಕಳ್ಳತನ ಮಾಡಿದ್ರು

ಸಿಸಿ ಟಿವಿ ಜಖಂಗೊಳಿಸಿ ಅಂಗಡಿಗಳ ಬಾಗಿಲು ಮುರಿದು ಕಳ್ಳತನ ಮಾಡಿರುವ ಘಟನೆ ನಡೆದಿದೆ.

news

ಲೋಕಸಭೆಯ ಮಾಜಿ ಸ್ಪೀಕರ್​ ಸೋಮನಾಥ ಚಟರ್ಜಿ ಆರೋಗ್ಯ ಸ್ಥಿತಿಯಲ್ಲಿ ಏರುಪೇರು

ಕೋಲ್ಕತ್ತಾ : ಹಿರಿಯ ಕಮ್ಯೂನಿಸ್ಟ್ ಮುಖಂಡ ಮತ್ತು ಲೋಕಸಭೆಯ ಮಾಜಿ ಸ್ಪೀಕರ್​ ಸೋಮನಾಥ ಚಟರ್ಜಿ ಅವರ ಆರೋಗ್ಯ ...

news

ಬಿಜೆಪಿಯವರಂತೆ ಸದನದಲ್ಲಿ ಸಿಎಂ ಬ್ಲೂ ಫಿಲಂ ನೋಡ್ಬೇಕಾ ಎಂದ ಎಂಎಲ್ಸಿ!

ಸಿಎಂ ಕುಮಾರಸ್ವಾಮಿ ನಾಟಿ ಮಾಡಿರುವುದಕ್ಕೆ ಬಿಜೆಪಿ ಟೀಕೆ ಮಾಡಿದ ಬೆನ್ನಲ್ಲೇ ಬಿಜೆಪಿ ನಾಯಕರ ವಿರುದ್ಧ ...

news

ಕಸ್ತೂರಿ ರಂಗನ್ ವರದಿ: ಸುಪ್ರೀಂ ಕೋರ್ಟಗೆ ಸರಕಾರ ವರದಿ ಸಲ್ಲಿಸಲಿ

ಕಸ್ತೂರಿ ರಂಗನ್ ವರದಿ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಲು ಆಗಸ್ಟ್ 25 ಕೊನೆಯ ದಿನವಾಗಿದೆ. ಆದರೂ ಈಗಲೂ ...