ಪೋಂಗ್ಯಾಂಗ್ : ನೀರಿನಲ್ಲೂ ದಾಳಿ ಮಾಡಿ ಶತ್ರುಸೈನ್ಯವನ್ನು ನಾಶಮಾಡಬಲ್ಲ ಅಣು ಸಾಮರ್ಥ್ಯದ ಅಂಡರ್ ವಾಟರ್ ಡ್ರೋನ್ `ಹೈಲ್’ ಪ್ರಯೋಗ ಯಶಸ್ವಿಯಾಗಿದೆ ಎಂದು ಉತ್ತರ ಕೋರಿಯಾ ಹೇಳಿಕೊಂಡಿದೆ. ಈ ಮೂಲಕ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಅಮೆರಿಕ-ದಕ್ಷಿಣ ಕೊರಿಯಾದ ಜಂಟಿ ಮಿಲಿಟರಿ ಸಮರಾಭ್ಯಾಸ ನಿಲ್ಲಿಸಬೇಕೆಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ. ಹೈಲ್ ಡ್ರೋನ್ ಮೂಲಕ ಭಾರೀ ಸುನಾಮಿಯನ್ನೇ ಸೃಷ್ಟಿಸಿ ತೀರ ಪ್ರದೇಶದ ನೌಕಾನೆಲೆ, ಸಮುದ್ರದ ಮಧ್ಯೆ ಇರುವ ಶತ್ರುಸ್ಥಾವರಗಳನ್ನ