ಅಮೆರಿಕದಲ್ಲಿ ಒಮಿಕ್ರೋನ್ ಅಬ್ಬರ!

ವಾಷಿಂಗ್ಟನ್| Ramya kosira| Last Modified ಗುರುವಾರ, 13 ಜನವರಿ 2022 (09:16 IST)


ವಾಷಿಂಗ್ಟನ್ : ಅಮೆರಿಕದಲ್ಲಿ ಒಮಿಕ್ರೋನ್ ಅಬ್ಬರ ಮುಂದುವರೆದಿದ್ದು, ಒಂದೇ ದಿನ ಅಮೆರಿಕದಲ್ಲಿ 13.5 ಲಕ್ಷ ಕೋವಿಡ್ ಪ್ರಕರಣ ದಾಖಲಾಗಿದೆ.
ಇದು ವಿಶ್ವದಲ್ಲೇ ದಾಖಲಾದ ಅತಿ ಹೆಚ್ಚಿನ ದೈನಂದಿನ
ಪ್ರಕರಣವಾಗಿದೆ. ಇದೇ ದಿನ ಅತಿ ಹೆಚ್ಚು ಜನರು ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕೇವಲ 3 ವಾರದಲ್ಲಿ ದುಪ್ಪಟ್ಟಾಗಿದೆ.


ಜ.3ರಂದು ದಾಖಲಾಗಿದ್ದ 10 ಲಕ್ಷ ದೈನಂದಿನ ಪ್ರಕರಣ ಈ
ಹಿಂದಿನ ದಾಖಲೆಯಾಗಿತ್ತು. ಎರಡು ವಾರಗಳಲ್ಲಿ ಅಮೆರಿಕದ ಪ್ರಕರಣಗಳು ಮೂರು ಪಟ್ಟು ಹೆಚ್ಚಾಗಿವೆ. ಈವರೆಗೆ ಅಮೆರಿಕದಲ್ಲಿ 6.33 ಕೋಟಿ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 8.63 ಲಕ್ಷ ಜನರು
ಸಾವಿಗೀಡಾಗಿದ್ದಾರೆ. 1.98 ಕೋಟಿ ಸಕ್ರಿಯ ಪ್ರಕರಣಗಳಿವೆ.

ಇದರಲ್ಲಿ ಇನ್ನಷ್ಟು ಓದಿ :