Widgets Magazine

ಆರ್ಟಿಕಲ್ 370 ರದ್ದು ವಿಚಾರದಲ್ಲಿ ಭಾರತದ ಪರ ನಿಂತ ಪಾಕ್ ನಾಯಕ

ಪಾಕಿಸ್ತಾನ| pavithra| Last Modified ಸೋಮವಾರ, 2 ಸೆಪ್ಟಂಬರ್ 2019 (09:31 IST)
: ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ 370 ವಿಶೇಷ ಸ್ಥಾನಮಾನ ರದ್ದುಗೊಳಿಸಿರುವುದರ ಕುರಿತು ಇದೀಗ ಪಾಕಿಸ್ತಾನದ ಎಂಕ್ಯುಎಂ ನ ನಾಯಕ ಅಲ್ತಾಫ್ ಹುಸೇನ್ ಭಾರತದ ಪರವಾಗಿ ಮಾತನಾಡಿದ್ದಾರೆ.
ಈ ವಿಚಾರವಾಗಿ ಇಡೀ ಪಾಕಿಸ್ತಾನವೇ ಭಾತರ ಹಾಗೂ ಪ್ರಧಾನಿ ಮೋದಿಯ ವಿರುದ್ಧ ಕಿಡಿಕಾರಿದ್ದಾರೆ. ಆದರೆ ಪಾಕಿಸ್ತಾನದ ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್‌ (ಎಂಕ್ಯುಎಂ) ಸ್ಥಾಪಕ ಅಲ್ತಾಫ್ ಹುಸೇನ್, ಆರ್ಟಿಕಲ್ 370 ರದ್ದತಿ ಭಾರತದ ಆಂತರಿಕ ವಿಷಯ, ಇದರಲ್ಲಿ ಪಾಕಿಸ್ತಾನ ಮಧ್ಯಪ್ರವೇಶಿಸಬಾರದು. ಭಾರತೀಯರ ಪಡೆದೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ದಾರೆ.


ಅಲ್ಲದೇ  ಸಾರೇ ಜಹಾನ್ ಸೇ ಅಚ್ಚಾ ಹಾಡನ್ನು ಹೆಮ್ಮೆಯಿಂದ ಹಾಡಿದ ಅವರು, ಸರ್ಕಾರ ಹಾಗೂ ಸೇನೆ ಎರಡೂ 72 ವರ್ಷಗಳಿಂದ ಪಾಕಿಸ್ತಾನಿಯರನ್ನು ಕಾಶ್ಮೀರದ ವಿಷಯದಲ್ಲಿ ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :