ಇಸ್ಲಾಮಾಬಾದ್ : ಪ್ರಾರ್ಥನೆ ಮಾಡುವ ವೇಳೆ ಭಾರತದಲ್ಲೂ ಕೊಂದಿಲ್ಲ ಎಂದು ಪೇಶಾವರ್ನಲ್ಲಿ ಮಸೀದಿ ಮೇಲೆ ನಡೆದ ಬಾಂಬ್ ದಾಳಿ ಬಗ್ಗೆ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಪ್ರತಿಕ್ರಿಯಿಸಿದ್ದಾರೆ.ಪ್ರಾರ್ಥನೆ ಮಾಡುವಾಗ ಭಾರತದಲ್ಲಾಗಲಿ ಅಥವಾ ಇಸ್ರೇಲ್ನಲ್ಲಾಗಿ ಯಾರನ್ನೂ ಹತ್ಯೆ ಮಾಡಿಲ್ಲ. ಆದರೆ ಅದು ಪಾಕಿಸ್ತಾನದಲ್ಲಿ ಸಂಭವಿಸಿದೆ ಎಂದು ಆಸಿಫ್ ಬೇಸರ ವ್ಯಕ್ತಪಡಿಸಿದ್ದಾರೆ. 2010-2017 ರ ಭಯೋತ್ಪಾದನಾ ಘಟನೆಗಳ ಕುರಿತು ಮಾತನಾಡಿದ ಸಚಿವರು, ಈ ಯುದ್ಧವು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಅಧಿಕಾರಾವಧಿಯಲ್ಲಿ ಸ್ವಾತ್ನಿಂದ ಪ್ರಾರಂಭವಾಯಿತು.