ವಾಷಿಂಗ್ಟನ್ : ಕಾಶ್ಮೀರ ಸಮಸ್ಯೆ ಬಗೆಹರಿಯದೆ ಭಾರತದೊಂದಿಗೆ ಶಾಂತಿ ಮಾತುಕತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಹೇಳಿದ್ದಾರೆ.ವಾಷಿಂಗ್ಟನ್ ನಲ್ಲಿ ನಡೆದ ಕಾರ್ಯತಂತ್ರ ಮತ್ತು ಅಂತರಾಷ್ಟ್ರೀಯ ಅಧ್ಯಯನಗಳ ಚಿಂತಕರ ಸಮಾವೇಶದಲ್ಲಿ ಮಾತನಾಡಿದ ಅವರು, ನೆರೆಯ ದೇಶಗಳಲ್ಲಿ ಶಾಂತಿ ನೆಲೆಸಬೇಕೆಂದು ನಮ್ಮ ಸರ್ಕಾರ ಬಯಸುತ್ತದೆ. ಆರ್ಥಿಕ ಸುಧಾರಣೆ ಮತ್ತು ಇತರ ಕ್ಷೇತ್ರಗಳ ಅಭಿವೃದ್ಧಿಗೆ ನಮ್ಮ ದೇಶದ ಅಜೆಂಡಾವನ್ನು ಸಾಧಿಸುವತ್ತ ಗಮನ ಹರಿಸಲು ನಮಗೆ ಶಾಂತಿ