ಕೊಲಂಬೋ : ಅತ್ಯಂತ ತೀವ್ರ ಮಟ್ಟದ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾದ ತಪ್ಪಿಗೆ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಕ್ಷಮೆ ಕೇಳಿದ್ದಾರೆ. ಈ ತಪ್ಪನ್ನು ಸರಿ ಪಡಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.ಭೀಕರ ಆರ್ಥಿಕ ಸ್ಥಿತಿಯಿಂದ ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದ್ದು, ಇದರ ಮಧ್ಯೆಯೇ ಸೋಮವಾರ ಹೊಸ 17 ಸದಸ್ಯರ ಕ್ಯಾಬಿನೆಟ್ ಅನ್ನು ನೇಮಿಸಿದ್ದರು. ಈ ಹೊಸ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಚರ್ಚಿಸುವಾಗ ರಾಜಪಕ್ಸೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ ಅತೀ ದೊಡ್ಡ ಸವಾಲುಗಳನ್ನು