ಮಾಸ್ಕೋ : ಕಳೆದ ವರ್ಷದಿಂದ ಉಕ್ರೇನ್ ವಿರುದ್ಧ ಯುದ್ಧ ಸಾರಿದಾಗಿನಿಂದಲೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆರೋಗ್ಯ ವಿಚಾರ ನಿರಂತರ ಚರ್ಚೆಯಲ್ಲಿದೆ. ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ವರದಿ ಬಿಡುಗಡೆಯಾಗಿದ್ದು, ಪುಟಿನ್ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ ಎಂದು ಹೇಳಲಾಗಿದೆ. ಪುಟಿನ್ಗೆ ಅತಿಯಾದ ತಲೆನೋವು, ದೃಷ್ಟಿ ಮಂಜಾಗುವುದು ಹಾಗೂ ನಾಲಿಗೆಯಲ್ಲಿ ಮರಗಟ್ಟುವಿಕೆ ಉಂಟಾಗುತ್ತಿದೆ ಎಂದು ವೈದ್ಯರು ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಪುಟಿನ್ ಈಗಾಗಲೇ ಬಲಗೈ ಮತ್ತು ಬಲಗಾಲಿನ ಭಾಗಶಃ ಸ್ವಾಧೀನ