Widgets Magazine

ಮನೋರಂಜನಾ ಉದ್ಯಮಕ್ಕೆ ಗುಡ್ ಬೈ ಹೇಳಿದ ಪಾಕ್ ಗಾಯಕಿ ರಬಿ ಪಿರ್ ಜಾದಾ

ಲಾಹೋರ್| pavithra| Last Updated: ಬುಧವಾರ, 6 ನವೆಂಬರ್ 2019 (15:50 IST)
ಲಾಹೋರ್ : ಕಾಶ್ಮೀರ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆದರಿಕೆ ಹಾಕಿದ್ದ ಪಾಕ್ ಗಾಯಕಿ ರಬಿ ಪಿರ್ ಜಾದಾ ಇದೀಗ ಮನೋರಂಜನಾ ಉದ್ಯಮಕ್ಕೆ ಗುಡ್ ಬೈ ಹೇಳಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ  ಪ್ರಧಾನಿ ಮೋದಿಯವರ ವಿರುದ್ಧ ಕಿಡಿಕಾರಿದ್ದ ಪಾಕ್ ಗಾಯಕಿ ರಬಿ ಪಿರ್ ಜಾದಾ ಒಮ್ಮೆ ಮೊಸಳೆ, ಹೆಬ್ಬಾವನ್ನು ತೋರಿಸಿ ಬೆದರಿಕೆ ಹಾಕಿದ್ದರು. ನಂತರ ಆತ್ಮಹತ್ಯೆ ಬಾಂಬ್ ರೀತಿಯ ಜಾಕೆಟ್ ಧರಿಸಿ ಮತ್ತೊಮ್ಮ ಬೆದರಿಸಿದ್ದರು.

ಆದರೆ ಇತ್ತೀಚೆಗೆ ಅವರ ನಗ್ನ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾದ ಹಿನ್ನಲೆಯಲ್ಲಿ ಮನೋರಂಜನಾ ಉದ್ಯಮದಿಂದ ಹೊರಬರಲು ನಿರ್ಧರಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಾನು ರಬಿ  ಪಿರ್ ಜಾದಾ ಶೋಬಿಜ್ ನಿಂದ ಹೊರಬರುತ್ತಿದ್ದೇನೆ, ಅಲ್ಲಾಹು ನನ್ನ ತಪ್ಪುಗಳನ್ನು ಕ್ಷಮಿಸಲಿ ಮತ್ತು ನನ್ನ ಪರವಾಗಿ ಜನರ ಹೃದಯಗಳನ್ನು ಮೃದುಗೊಳಿಸಲಿ ಎಂದು ಬರೆದುಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :