ನ್ಯೂಯಾರ್ಕ್ : ಇಲಿ ಕಾಟವನ್ನು ತಾಳಲಾರದೇ ನ್ಯೂಯಾರ್ಕ್ ಸಿಟಿ ಮೇಯರ್ರೊಬ್ಬರು ಇಲಿ ಕೊಲ್ಲಲು ಜನರನ್ನು ನೇಮಿಸುವುದಾಗಿ ಆಹ್ವಾನಿಸಿರುವ ಜಾಹಿರಾತನ್ನು ಹಾಕಿರುವ ವಿಚಿತ್ರ ಘಟನೆ ನಡೆದಿದೆ.ನ್ಯೂಯಾರ್ಕ್ ನಗರದಲ್ಲಿ ಸುಮಾರು 1.8 ಕೋಟಿ ಇಲಿಗಳು ಇವೆ ಎಂದು ವರದಿಯಾಗಿತ್ತು. ಇದಾದ ಬಳಿಕ, ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆಡಮ್ಸ್ ಇಲಿಯನ್ನು ಕೊಲ್ಲಲು ಜನರನ್ನು ನೇಮಿಸುವುದಾಗಿ ಜಾಹೀರಾತು ನೀಡಿದ್ದಾರೆ. ಅಷ್ಟೇ ಅಲ್ಲದೆ ಇವರಿಗೆ ಸಂಬಳವನ್ನು ನಿಗದಿ ಪಡಿಸಿದ್ದಾರೆ.ಇಲಿಯನ್ನು ಸಾಯಿಸಲು ಚಾಣಾಕ್ಷ್ಯತನವನ್ನು ಹೊಂದಿರಬೇಕು. ಆಯ್ಕೆಯಾದ ಸಿಬ್ಬಂದಿಯೂ