ವಾಷಿಂಗ್ಟನ್ : ರಷ್ಯಾದ ಆಕ್ರಮಣಕ್ಕೆ ತುತ್ತಾಗಿರುವ ಉಕ್ರೇನ್ಗೆ ಅಗತ್ಯ ಆರ್ಥಿಕ ನೆರವು ನೀಡುವುದಾಗಿ ವಿಶ್ವ ಬ್ಯಾಂಕ್ ಭರವಸೆ ನೀಡಿದೆ.ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿರ್ಧಾರಕ್ಕೆ ಕಳವಳ ವ್ಯಕ್ತಪಡಿಸಿರುವ ವಿಶ್ವ ಬ್ಯಾಂಕ್, ನಾವು ಉಕ್ರೇನ್ಗೆ ತಕ್ಷಣದ ಬೆಂಬಲವನ್ನು ಒದಗಿಸಲು ಸಿದ್ಧರಿದ್ದೇವೆ. ಹಣಕಾಸು ಹಂಚಿಕೆ ಸೇರಿದಂತೆ ಇತರೆ ಬೆಂಬಲಕ್ಕಾಗಿ ಕ್ರಮಕೈಗೊಂಡಿದ್ದೇವೆ. ಇದಕ್ಕಾಗಿ ನಮ್ಮ ಎಲ್ಲಾ ಹಣಕಾಸು ಮತ್ತು ತಾಂತ್ರಿಕ ಬೆಂಬಲ ಸಾಧನಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ. ವಿಶ್ವ ಬ್ಯಾಂಕ್ ಗ್ರೂಪ್ನ ಅಧ್ಯಕ್ಷ ಡೇವಿಡ್ ಮಾಲ್ಪಾಸ್