ಬೀಜಿಂಗ್ : ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ಚೀನಾದ ಶಾಂಘೈ ನಗರದಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಪ್ರಾರಂಭಿಸಿ 3 ವಾರಗಳು ಕಳೆದಿವೆ.ಇಂದಿಗೂ ಶಾಂಘೈ ನಗರದ ಜನರು ಕಳೆದ 3 ವಾರಗಳಿಂದ ತಮ್ಮ ಮನೆಗಳಿಂದ ಹೊರ ಇಣುಕಲೂ ಸಾಧ್ಯವಾಗುತ್ತಿಲ್ಲ. ಇದೀಗ ನಗರದ ಎರಡೂವರೆ ಕೋಟಿ ಜನರು ಆಹಾರ, ಔಷಧಗಳಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.ಶಾಂಘೈ ನಗದ ಕಟ್ಟುನಿಟ್ಟಿನ ಲಾಕ್ಡೌನ್ ನಡುವೆ ನಗರದ ನಿವಾಸಿಗಳು ತಮ್ಮ ಮನೆಗಳಿಂದ ಕಿರುಚಾಟ, ಅರಚಾಟಗಳನ್ನು ಪ್ರಾರಂಭಿಸಿದ್ದಾರೆ. ಜನರು ತಮ್ಮ ಕಿಟಕಿಗಳಿಂದ ಕಿರುಚುವ